ಯೂನಿಕೋಡ್ ಮತ್ತು ಕನ್ನಡ -
ಗಣಕ ಕ್ಷೇತ್ರದಲ್ಲಿ ಯೂನಿಕೋಡ್ ಎಂಬ ಹೊಸ ಸಂಕೇತ ವ್ಯವಸ್ಥೆಯು ಜಾರಿಗೆ ಬರುತ್ತಿದೆ. ಇತ್ತೀಚೆಗೆ ವಿಂಡೋಸ್ ಎಕ್ಸ್‍ಪಿ ಹಾಗೂ 2003 ಗಣಕ ಕಾರ್ಯಾಚರಣ ವ್ಯವಸ್ಥೆಗಳು ಬರುತ್ತಿವೆ; ಲೈನಕ್ಸ್ ಕಾರ್ಯಾಚರಣ ವ್ಯವಸ್ಥೆಯೂ ಜನಪ್ರಿಯವಾಗುತ್ತಿದೆ. ಇವುಗಳಲ್ಲಿ ಯೂನಿಕೋಡ್ ಜಾರಿಗೆ ಬಂದಿದೆ. ಈ ಸಂಕೇತ ವ್ಯವಸ್ಥೆಯಿಂದ ಗಣಕಗಳ ಬಳಕೆದಾರರಿಗೆ ಅನೇಕಾನೇಕ ಅನುಕೂಲತೆಗಳು ಒದಗುತ್ತಿವೆ; ಬಹುಭಾಷಾ ಬಳಕೆಗೆ ಮುಕ್ತ ಅವಕಾಶಗಳು ಉಂಟಾಗುತ್ತಿವೆ. 

ಯೂನಿಕೋಡ್ ವ್ಯವಸ್ಥೆಯು ಗಣಕದ ಆಂತರಿಕ ವ್ಯವಹಾರ ಮತ್ತು ಗಣಕ ಕಾರ್ಯಾಚರಣ ವ್ಯವಸ್ಥೆಯ ತಾಂತ್ರಿಕ ಕ್ರಿಯೆಗಳಿಗೆ ಸಂಬಂಧಿಸಿದ್ದು. ಈ ಕ್ರಿಯೆಗಳು ಬಳಕೆದಾರರ ನೇರ ತಿಳಿವಳಿಕೆಗೆ ಬರುವುದಿಲ್ಲ, ಇದರ ಅಗತ್ಯವೂ ಇಲ್ಲ. ತಿಳಿವಳಿಕೆಗೆ ಬರುವುದಿಲ್ಲ ಮತ್ತು ಬಳಕೆದಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ವಿವಿಧ ಕಾರ್ಯಾಚರಣ ವ್ಯವಸ್ಥೆಗಳ (ವಿಂಡೋಸ್, ಲಿನಕ್ಸ್ ಇತ್ಯಾದಿ) ನೂತನ ಆವೃತ್ತಿಗಳಲ್ಲಿ ನೀಡಿರುವ ಈ ಹೆಚ್ಚಿನ ಸೌಲಭ್ಯವನ್ನು ಅರಿತು ಬಳಸಿಕೊಳ್ಳುವುದಷ್ಟೇ ಬಳಕೆದಾರರ ಕೆಲಸವಾಗಿದೆ. ಬಳಕೆದಾರರು ಎಂದಿನಂತೆ ಗಣಕವನ್ನು ಚಾಲನೆಗೊಳಿಸಿ ಈಗಾಗಲೇ ಬಳಸುತ್ತಿರುವ ಕೀಲಿಮಣೆಯನ್ನೇ ಎಂದಿನಂತೆಯೇ ಬಳಸಬಹುದು. ಕನ್ನಡಕ್ಕೆ ಸಂಬಂಧಿಸಿದಂತೆಯೂ ಈಗಿರುವ ಕೀಲಿಮಣೆ ವಿನ್ಯಾಸ ಅಂತೆಯೇ ಬಳಕೆಗೆ ದೊರಕುತ್ತದೆ. 
ಆಸ್ಕಿ (ಂSಅII) ಸಂಕೇತಗಳು

ಯಾವುದೇ ಭಾಷೆಯ ಅಕ್ಷರಗಳು/ಅಕ್ಷರಭಾಗಗಳು ಅಥವಾ ಚಿಹ್ನೆಗಳನ್ನು ಗಣಕ ಸ್ಮರಣಕೋಶಗಳಲ್ಲಿ ಸಂಖ್ಯೆಗಳನ್ನಾಗಿ ಶೇಖರಿಸಿಡಲಾಗುತ್ತದೆ. ಆದರೆ ಈ ಸಂಖ್ಯೆಗಳು ನಾವು ಸಾಮಾನ್ಯವಾಗಿ ಬಳಸುವ ದಶಮಾಂಶ ಸಂಖ್ಯೆಗಳ ಬದಲು ದ್ವಿಮಾನಾಂಕ ಸಂಖ್ಯೆಗಳು (ಅಂದರೆ ಬಳಕೆಯಲ್ಲಿರುವ 0, 1, 2, 3, 4, 5, 6, 7, 8, 9 ಮೂಲ ಸಂಖ್ಯಾ ಸಂಕೇತಗಳ ಬದಲು 0 ಮತ್ತು 1 ಎರಡೇ ಸಂಕೇತಗಳನ್ನು ಬಳಸುವ ಸಂಖ್ಯೆಗಳು). ಸ್ಮರಣಕೋಶದ ರಚನೆಯಲ್ಲಿ ಅನುಸರಿಸಿರುವ ಶಿಷ್ಟತೆಯಂತೆ ಪ್ರತಿಯೊಂದು ಸ್ಮರಣಕೋಶವೂ ಎಂಟು ಬಿಟ್‍ಗಳನ್ನು ಹೊಂದಿರುತ್ತದೆ. ಅದನ್ನು ಒಂದು ಬೈಟ್ ಎಂದು ಕರೆಯಲಾಗುತ್ತದೆ. ಒಂದು ಬಿಟ್ ಅಂದರೆ ವಿದ್ಯುನ್ಮಾನ ಸಂಪರ್ಕ ಹೊಂದಿರುವ ಅಥವಾ ಹೊಂದಿಲ್ಲದಿರುವ ವಿದ್ಯುದಂಗವಾಗಿರುತ್ತದೆ. ವಿದ್ಯುನ್ಮಾನ ಸಂಪರ್ಕವನ್ನು ಹೊಂದಿದ್ದರೆ 1 ಎಂಬ ಸಂಖ್ಯೆಯಿಂದ ಮತ್ತು ಸಂಪರ್ಕವಿಲ್ಲದಿದ್ದರೆ 0 ಸಂಖ್ಯೆಯಿಂದ ಪ್ರತಿನಿಧಿಸಲಾಗುತ್ತದೆ. ಎಂಟು ಬಿಟ್‍ಗಳಿಗೂ ಸಂಪರ್ಕವಿಲ್ಲದಿದ್ದರೆ ಅದು 00000000 ಸಂಖ್ಯೆಯನ್ನೂ ಎಲ್ಲವೂ ವಿದ್ಯುನ್ಮಾನ ಸಂಪರ್ಕ ಹೊಂದಿದ್ದರೆ ಅದು 11111111 ಸಂಖ್ಯೆಯನ್ನೂ ಪ್ರತಿನಿಧಿಸುತ್ತದೆ. ಇಲ್ಲಿ ಎರಡೇ ಅಂಕಿಗಳು (0 ಮತ್ತು 1) ಪ್ರಸ್ತುತವಾದುದರಿಂದ ಈ 8 ಬಿಟ್‍ಗಳಿಂದಾದ ಸಂಖ್ಯೆಗಳು ದ್ವಿಮಾನಾಂಕ ಸಂಖ್ಯೆಗಳಾಗುತ್ತವೆ. ಉದಾಹರಣೆಗೆ 0, 2, 4, 6, 8, 15, 255 ಎಂಬ ದಶಮಾನ ಸಂಖ್ಯೆಗಳನ್ನು ಪ್ರತಿನಿಧಿಸುವ ದ್ವಿಮಾನಾಂಕ ಸಂಖ್ಯೆಗಳು 00000000, 00000010, 00000100, 00000110, 00001000 00001111, 11111111 ಆಗಿರುತ್ತವೆ. ಒಟ್ಟಿನಲ್ಲಿ ಒಂದು ಸ್ಮರಣಕೋಶದಲ್ಲಿ ಎಂಟು ಅಂಕಿಗಳನ್ನು ಪ್ರತಿನಿಧಿಸಲು ಅವಕಾಶವಿದ್ದು ಆ ಸ್ಮರಣಕೋಶದಲ್ಲಿ ಯಾವುದೇ ಅಕ್ಷರ/ಗಣಿತಚಿಹ್ನೆ/ವಿಶೇಷಚಿಹ್ನೆ ಮುಂತಾದವುಗಳನ್ನು ಪ್ರತಿನಿಧಿಸಲು 256 (0 ಯಿಂದ 255) ಅವಕಾಶಗಳು ಮಾತ್ರ ದೊರಕುತ್ತವೆ. ಅಂದರೆ ಪ್ರತಿ ಅಕ್ಷರ/ಗಣಿತಚಿಹ್ನೆ/ವಿಶೇಷಚಿಹ್ನೆಯನ್ನು ಸ್ಮರಣಕೋಶವೊಂದರಲ್ಲಿ 0 ಯಿಂದ 255 ರವರೆಗೆ ಯಾವುದೇ ಒಂದು ಸಂಖ್ಯೆಯಿಂದ ಪ್ರತಿನಿಧಿಸಲು ಸಾಧ್ಯ. ಇದನ್ನೇ ಆಸ್ಕಿ (ಂSಅII - ಂmeಡಿiಛಿಚಿಟಿ Sಣಚಿಟಿಜಚಿಡಿಜ ಅoಜe ಜಿoಡಿ Iಟಿಜಿoಡಿmಚಿಣioಟಿ Iಟಿಣeಡಿಛಿhಚಿಟಿge) ಎಂಬ ಹೆಸರಿನಿಂದ ಕರೆಯುತ್ತಾರೆ. ಇಂಗ್ಲಿಷ್‍ನಲ್ಲಿ ಂ ಯಿಂದ Z ವರೆಗೆ ಮತ್ತು ಚಿ ಯಿಂದ z ವರೆಗೆ ಮಾತ್ರ ಅಕ್ಷರಗಳಿರುವುದರಿಂದ ಇಂಗ್ಲಿಷ್‍ಗಾಗಿ ಗಣಕದಲ್ಲಿ ಒಟ್ಟು 52 ಅವಕಾಶಗಳು ಮಾತ್ರ ಸಾಕು. ಈ 52 ಅಗತ್ಯಗಳಿಗಾಗಿ 52 ಸಂಖ್ಯೆಗಳನ್ನು ಗೊತ್ತುಪಡಿಸಲಾಗಿದೆ. ಇಂಗ್ಲಿಷ್ ಅಕ್ಷರಗಳನ್ನು ಕ್ರಮವಾಗಿ 65 ರಿಂದ 122 ವರೆಗಿನ ಸಂಖ್ಯೆಗಳನ್ನಾಗಿ (ಅಂದರೆ ಂ=65, ಃ=66, ಚಿ=97, x=120, ಥಿ=121 ಇತ್ಯಾದಿ ಶಿಷ್ಟತೆಗೊಳಪಡಿಸಿ) ಗುರುತಿಸಿದ್ದು ಇದನ್ನು ಅಂತಾರಾಷ್ಟ್ರೀಯ ಶಿಷ್ಟತೆಯನ್ನಾಗಿ ಒಪ್ಪಿಕೊಳ್ಳಲಾಗಿದೆ. 

ಗಣಕಗಳಲ್ಲಿ ಬೇರೆ ಭಾಷೆಗಳ ಅಕ್ಷರಗಳನ್ನು ಪ್ರತಿನಿಧಿಸಬೇಕಾಗಿದ್ದರೆ ಆ ಅಕ್ಷರಗಳಿಗೂ ಇವೇ ಸಂಖ್ಯೆಗಳನ್ನು ಬಳಸಬೇಕು. ಉದಾಹರಣೆಗೆ ಗಣಕಗಳಲ್ಲಿ ಕನ್ನಡ ಮೂಡಬೇಕಾದರೆ ಅ=65, ಆ=66, ಇ=67 ಇತ್ಯಾದಿ ಒಟ್ಟಿನಲ್ಲಿ ಗಣಕದಲ್ಲಿ ಇಂಗ್ಲಿಷ್ ಬಳಸುವಾಗ ಕನ್ನಡವನ್ನು ಬಳಸಲಾಗದು ಮತ್ತು ಕನ್ನಡ ಬಳಸುವಾಗ ಇಂಗ್ಲಿಷ್ ಹಿನ್ನೆಲೆಗೆ ಹೋಗಿಬಿಡುತ್ತದೆ. ಇದು ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ. ಒಂದು ಗಣಕದಲ್ಲಿ ಬೇರೆ ಬೇರೆ ಭಾಷೆಗಳನ್ನು ಬಳಸಬೇಕಾದರೆ ಅವುಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಬೇಕು. 

ಮುಂದುವರೆದು, ಕನ್ನಡದಲ್ಲಾದರೋ ಸ್ವರಗಳು, ವ್ಯಂಜನಗಳು ಹಾಗೂ ವಿಶೇಷ ಚಿಹ್ನೆಗಳು ಸೇರಿ 51 ಮೂಲಭೂತ ಅಕ್ಷರಗಳಿದ್ದರೂ ವ್ಯಂಜನಗಳೊಡನೆ ಸ್ವರಗಳು ಸೇರಿದ ಗುಣಿತಾಕ್ಷರಗಳು, ಒಂದಕ್ಕಿಂತ ಹೆಚ್ಚು ವ್ಯಂಜನಗಳು ಸೇರಿದ ಸಂಯುಕ್ತಾಕ್ಷರಗಳು ಬೇರೆ ಬೇರೆ ಆಕಾರಗಳನ್ನು ತಳೆದು ಸಹಸ್ರಾರು ಸಂಖ್ಯೆಯ ಪ್ರದರ್ಶನಾಕ್ಷರಗಳಾಗುತ್ತವೆ. ಅದೃಷ್ಟವಶಾತ್ ಗಣಕಗಳ ಉನ್ನತ ತಾಂತ್ರಿಕತೆಯ ಕಾರಣದಿಂದ ಒಟ್ಟು ಸುಮಾರು 150 ಅಕ್ಷರಭಾಗಗಳಿಂದ ಕನ್ನಡದ ಎಲ್ಲ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಪಡೆಯಬಹುದು. ಉದಾಹರಣೆಗೆ, `ಸ್ತ್ರೀ ಎಂಬ ಸಂಯುಕ್ತಾಕ್ಷರಕ್ಕೆ ಗಣಕದಲ್ಲಿ ಶೇಖರಿಸಿಡಲಾಗಿರುವ ` ಸಿ, ್ತ ,  ್ರ ಮತ್ತು ೀ ' ಅಕ್ಷರಭಾಗಗಳನ್ನು ಹಾಗೂ `ತ್ರ್ಯೋ ಸಂಯುಕ್ತಾಕ್ಷರಕ್ಕೆ ` v , É,  ್ರ , ್ಯ , ೂ ಮತ್ತು ೀ ' ಅಕ್ಷರಭಾಗಗಳನ್ನು ಬಳಸಲಾಗುತ್ತದೆ. ಈ ಅಕ್ಷರಭಾಗಗಳಿಗೆ ಆಸ್ಕಿಯ 65 ನೇ ಸಂಖ್ಯೆಯಿಂದ ಆರಂಭಿಸಿ ಅಕ್ಷರ ಸಂಕೇತಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಈ ರೀತಿಯ ಅಕ್ಷರಭಾಗಗಳ ಸಂಕೇತೀಕರಣದಿಂದ ಗಣಕಗಳಲ್ಲಿ ದಾಖಲಾಗುವ ಮಾಹಿತಿಗಳ ಅಕಾರಾದಿ ವರ್ಗೀಕರಣ ಮುಂತಾದ ಭಾಷಾ ಸಂಬಂಧಿತ ಅತ್ಯಗತ್ಯ ಕ್ರಿಯೆಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದಲೇ ಈ ಮಾಹಿತಿಗಳನ್ನು ಗಣಕದೊಳಗೆ ಸ್ವರ ವ್ಯಂಜನಗಳ ಮೂಲಾಕ್ಷರಗಳನ್ನಾಗಿ ಪರಿವರ್ತಿಸಬೇಕು (ಉದಾಹರಣೆಗೆ `ಕನ್ನಡ ಪದವನ್ನು ಗಣಕದೊಳಗೆ `ಕನ್‍ನಡ ಎಂದು, `ಸ್ತ್ರೀ ಅಕ್ಷರವನ್ನು `ಸ್‍ತ್‍ರ್‍ಈ' ಎಂದು ಕೇವಲ ಸ್ವರಗಳು ಮತ್ತು ವ್ಯಂಜನಗಳಿರುವ ಮೂಲಾಕ್ಷರಗಳ ರೂಪಕ್ಕೆ ಪರಿವರ್ತಿಸುವುದು). ಕನ್ನಡ ಭಾಷೆಯ ಧ್ವನ್ಯಾತ್ಮಕತೆ ಮತ್ತು ವೈe್ಞÁನಿಕತೆಯ ಗುಣಗಳ ಕಾರಣದಿಂದ ಇಂತಹ ಪರಿವರ್ತನೆಯನ್ನು ಕರಾರುವಾಕ್ಕಾಗಿ ಮಾಡಬಹುದು. ಈ ಮೂಲಾಕ್ಷರಗಳಿಗೂ ಪ್ರತ್ಯೇಕ ಂSಅII ಸಂಕೇತಗಳನ್ನು ಗೊತ್ತುಪಡಿಸಿ ಮೇಲ್ಕಂಡ ಭಾಷಾ ಸಂಸ್ಕರಣೆಯ ಕಾರ್ಯಗಳನ್ನು ಕೈಗೊಳ್ಳಬೇಕು. ಹೀಗೆ ಗುಣಿತಾಕ್ಷರ ಮತ್ತು ಸಂಯುಕ್ತಾಕ್ಷರಗಳನ್ನು ಮೂಲಾಕ್ಷರಗಳಿಗೆ ಪರಿವರ್ತಿಸುವ ಮತ್ತು ಮೂಲಾಕ್ಷರಗಳಿಗೆ ಆಸ್ಕಿ ಸಂಕೇತಗಳನ್ನು ಗುರುತಿಸುವ ಕ್ರಿಯೆಗಳನ್ನು ಸಾಧಿಸಲು ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬಹುದು. ಈ ತಾತ್ಕಾಲಿಕ ಬದಲೀಕರಣ ಮತ್ತು ಸಂಕೇತೀಕರಣಗಳು ಗಣಕಗಳ ಆಂತರಿಕ ಕ್ರಿಯೆಗಳು. ಒಟ್ಟಿನಲ್ಲಿ ಗಣಕದಲ್ಲಿ ಬಳಸುವಾಗ ಕನ್ನಡ ಅಥವಾ ಇಂತಹುದೇ ಇತರ ಭಾಷೆಗಳಿಗೆ (1) ಅಕ್ಷರಭಾಗಗಳ ಸಂಕೇತೀಕರಣ ಮತ್ತು (2) ಮೂಲಾಕ್ಷರಗಳ ಸಂಕೇತೀಕರಣ ಎರಡೂ ಅವಶ್ಯಕ. ಆದರೆ ಕೇವಲ ಮೂಲಾಕ್ಷರಗಳನ್ನು ಮಾತ್ರವೇ ಉಳ್ಳ ಲಿಪಿ ವ್ಯವಸ್ಥೆಯ ಇಂಗ್ಲಿಷ್‍ನಂತಹ ಭಾಷೆಗಳಿಗೆ ಈ ಎರಡು ವಿಧದ ಸಂಕೇತೀಕರಣದ ಅವಶ್ಯಕತೆ ಇರುವುದಿಲ್ಲ. 

ಎಂಟು ಅಂಕಿ ಸ್ಥಾನಗಳ ಆಸ್ಕಿ ವ್ಯವಸ್ಥೆಯನ್ನು ಆಧರಿಸಿ ಈಗಾಗಲೇ ಅಭಿವೃದ್ಧಿಗೊಂಡು ಬಳಸಲ್ಪಡುತ್ತಿರುವ ವಿವಿಧ ಭಾಷಾ ಲಿಪಿ ತಂತ್ರಾಂಶಗಳು ಸಾಮಾನ್ಯವಾಗಿ ಅಕ್ಷರಭಾಗ ಸಂಕೇತಗಳನ್ನೇ ಗಣಕಗಳಲ್ಲಿ ಶೇಖರಿಸಿಡುತ್ತಿವೆ. ಆದ್ದರಿಂದ ಮೂಲಾಕ್ಷರ ಸಂಕೇತಗಳನ್ನು ಕಾಪಿಡುವ ಹಾಗೂ ಇಸ್ಕಿ ವ್ಯವಸ್ಥೆಯು ತಂದೊಡ್ಡುವ ಸಮಸ್ಯೆಗಳು ನಮ್ಮ ಭಾಷೆಗಳನ್ನು ಕಾಡುತ್ತಿಲ್ಲ; ಅಲ್ಲದೆ ಭಾಷಾ ಸಂಸ್ಕರಣೆಗಾಗಿ ಇಸ್ಕಿಯ ಬದಲು ಎಲ್ಲ ಭಾರತೀಯ ಭಾಷಾ ಬಾಂಧವರೂ ಆಯಾ ಭಾಷೆಗಳ ಭಾಷಾ ಸಂಸ್ಕರಣಾ ಕ್ರಿಯೆಗಳಿಗೆ ಪ್ರತ್ಯೇಕ ಪರಿಹಾರಗಳನ್ನು ಕಂಡುಕೊಳ್ಳುವ ಹಾದಿಯಲ್ಲಿ ವಿಶಿಷ್ಟ ಸಂಕೇತೀಕರಣ ಮಾರ್ಗವನ್ನು ಅನುಸರಿಸಬಹುದು. ಕನ್ನಡಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಂತಹ ಯಶಸ್ವೀ ಮಾರ್ಗವನ್ನು ಕಂಡುಕೊಳ್ಳಲಾಗಿದೆ. 
ಯೂನಿಕೋಡ್ (UಓIಅಔಆಇ):

ಯೂನಿಕೋಡ್ ಎಂಬುದು 8 ಅಂಕಿಸ್ಥಾನಗಳುಳ್ಳ ಆಸ್ಕಿಗೆ ಬದಲಾಗಿ 16 ಅಂಕಿಸ್ಥಾನಗಳುಳ್ಳ, ಎಲ್ಲ ಭಾಷೆಗಳ ಮೂಲಾಕ್ಷರಗಳಿಗೆ ಪ್ರತ್ಯೇಕವಾದ ಅಂಕಿಗಳನ್ನು ನಿಗದಿಪಡಿಸುವ ತಂತ್ರ. ಇದರಿಂದಾಗಿ ಗಣಕಗಳಲ್ಲಿ ಎಲ್ಲ ಭಾಷೆಗಳನ್ನೂ ಯಾವುದೇ ನಿರ್ಬಂಧವಿಲ್ಲದೆ ಬಳಸುವ ಸೌಲಭ್ಯ ಉಂಟಾಗುತ್ತದೆ. ಈ ಸಂಕೇತೀಕರಣವನ್ನೇ ಎಲ್ಲ ಭಾಷೆಗಳೂ ಅಧಿಕೃತ ಅಂತಾರಾಷ್ಟ್ರೀಯ ಶಿಷ್ಟತೆ ಎಂದು ಪರಿಗಣಿಸಿ ಬಳಸಲು ಆರಂಭಿಸಿದ್ದಾರೆ. ಹೀಗೆ ಹೊಸದಾಗಿ ರೂಪಿತವಾಗಿರುವ 16 ಅಂಕಿಸ್ಥಾನಗಳುಳ್ಳ ಯೂನಿಕೋಡ್‍ನಲ್ಲಿ ಭಾರತೀಯ ಭಾಷೆಗಳಿಗೆ ಎಂಟು ಅಂಕಿಸ್ಥಾನಗಳುಳ್ಳ ಇಸ್ಕಿಯನ್ನೇ (ಮೂಲಾಕ್ಷರ ಸಂಕೇತಗಳು) ಆಧಾರವಾಗಿಟ್ಟುಕೊಳ್ಳಲಾಗಿದೆ. ಈ ನೂತನ ವ್ಯವಸ್ಥೆಯಲ್ಲಿ ಗಣಕಕ್ಕೆ ಊಡಿಸುವ ಎಲ್ಲ ಮಾಹಿತಿಗಳನ್ನೂ ಯೂನಿಕೋಡ್ ಸಂಕೇತಗಳನ್ನಾಗಿಯೇ (ಮೂಲಾಕ್ಷರ ಸಂಕೇತಗಳನ್ನಾಗಿ) ಗಣಕಗಳಲ್ಲಿ ಶೇಖರಿಸಿಡಲಾಗುವುದು. ಮಾಹಿತಿಗಳನ್ನು ಗಣಕದ ತೆರೆಯ ಮೇಲೆ ಮೂಡಿಸಲು ಅಥವಾ ಕಾಗದದ ಮೇಲೆ ಮುದ್ರಿಸಲು ಮೊದಲಿಗೆ ಗಣಕಗಳೊಳಗೆ ಈ ಮೂಲಾಕ್ಷರ ಸಂಕೇತಗಳನ್ನು ಅಕ್ಷರಭಾಗ ಸಂಕೇತಗಳನ್ನಾಗಿ ಪರಿವರ್ತಿಲಾಗುವುದು. ಈ ಪರಿವರ್ತಿತ ಅಕ್ಷರಭಾಗ ಸಂಕೇತಗಳಿಗೆ ಗೊತ್ತುಪಡಿಸಿದ ನಿರ್ದಿಷ್ಟ ಲಿಪಿಯ ಅಕ್ಷರಭಾಗಗಳು ಅಂದವಾಗಿ ಜೋಡಣೆಗೊಂಡು ತೆರೆಯಮೇಲೆ ಮೂಡುತ್ತವೆ ಅಥವಾ ಕಾಗದದ ಮೇಲೆ ಮುದ್ರಣಗೊಳ್ಳುತ್ತವೆ. ಇದಿಷ್ಟು ಯೂನಿಕೋಡ್ ವೃತ್ತಾಂತ.

ಯೂನಿಕೋಡ್‍ನ ಅನುಕೂಲತೆಗಳು ಮತ್ತು ಯೂನಿಕೋಡ್‍ಗೆ ಬದಲಾಯಿಸುವಾಗ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಈಗ ಪರಿಶೀಲಿಸೋಣ.

ಅನುಕೂಲತೆಗಳು:
ಈಗಾಗಲೇ ತಿಳಿಸಿರುವಂತೆ ಆಸ್ಕಿ ಸಂಕೇತೀಕರಣದಲ್ಲಿ ಎಲ್ಲಾ ಭಾಷೆಗಳಿಗೂ ಕೇವಲ 256 ಸ್ಥಾನಗಳುಳ್ಳ ಒಂದೇ ಒಂದು ಸಂಕೇತಾಂಕಣವಿರುತ್ತದೆ. ಅಂದರೆ ಒಂದು ಭಾಷೆಗೆ ಬಳಸುವ ಸಂಖ್ಯಾ ಸಂಕೇತಗಳನ್ನೇ ಬೇರೊಂದು ಭಾಷೆಗೂ ಬಳಸಬೇಕು. ಆದ್ದರಿಂದ ಗಣಕದಲ್ಲಿ ಒಂದು ಭಾಷೆಯನ್ನು ಬಳಸುವ ಕ್ರಿಯೆಯು ಚಾಲ್ತಿಯಲ್ಲಿರುವಾಗ ಬೇರೊಂದು ಭಾಷೆಯನ್ನು ಬಳಸಲು ಆಗುವುದಿಲ್ಲ. ಆದ್ದರಿಂದ ಒಂದೇ ವಾಕ್ಯದಲ್ಲಿ ವಿವಿಧ ಭಾಷಾ ಲಿಪಿಗಳನ್ನು ಬಳಸಲು ಅನೇಕ ತೊಡಕುಗಳುಂಟಾಗುತ್ತವೆ. ಆದರೆ ಯೂನಿಕೋಡ್ ಸಂಕೇತೀಕರಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಭಾಷೆಗೂ 256 ಸ್ಥಾನಗಳ ಪ್ರತ್ಯೇಕ ಅಂಕಣವಿರುತ್ತದೆ. ಅಂದರೆ ತಲಾ 256 ಪ್ರತ್ಯೇಕ ಸಂಖ್ಯಾ ಸಂಕೇತಗಳುಳ್ಳ 256 ಉಪಅಂಕಣಗಳಲ್ಲಿ 256 ಭಾಷೆಗಳನ್ನು ಅಳವಡಿಸಬಹುದಾಗಿದೆ. ಹೀಗೆ ರೂಪಿಸಲಾಗಿರುವ ಯೂನಿಕೋಡ್‍ನಿಂದ ಉಂಟಾಗುವ ಅನುಕೂಲತೆಗಳ ಪೈಕಿ ಬಹುಮುಖ್ಯವಾದ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ. 

ಗಣಕಗಳಲ್ಲಿ ಬಹುಭಾಷಾ ಬಳಕೆಗೆ ಅನಿರ್ಬಂಧಿತ ಅವಕಾಶಗಳು ದೊರಕುತ್ತವೆ. ಬಹುಮುಖ್ಯವಾಗಿ ಗಣಕಗಳಲ್ಲಿ ಬಹುಭಾಷಾ ಬಳಕೆಯು ಸುಲಭವಾಗುತ್ತದೆ. ಅಂದರೆ ಒಂದೇ ಅಕ್ಷರಶೈಲಿಯಲ್ಲಿ ಬೇರೆ ಬೇರೆ ಭಾಷಾ ವಿಭಾಗಗಳಿರಲು ಸಾಧ್ಯ. ಆದ್ದರಿಂದ ಒಂದೇ ವಾಕ್ಯದಲ್ಲಿ ನಮಗೆ ಬೇಕಾದ ವಿವಿಧ ಭಾಷಾ ಮಾಹಿತಿಗಳನ್ನು ಕೀಲಿಸುವಂತಹ ವ್ಯವಸ್ಥೆಯನ್ನು ರೂಪಿಸಬಹುದು; ಎಲ್ಲ ಭಾಷೆಗಳಿಗೆ ಆಗುವಂತೆ ಅನ್ವಯಿಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವತ್ರೀಕರಿಸಬಹುದು. 

ಅಂತರಜಾಲ, ವಿದ್ಯುನ್ಮಾನ ಅಂಚೆ ಸೌಲಭ್ಯಗಳು ಬಹುಭಾಷಾ ಮಾಧ್ಯಮದಲ್ಲಿರುವಂತೆ ಮಾಡಬಹುದು.

ಒಟ್ಟಿನಲ್ಲಿ ಯೂನಿಕೋಡ್‍ನಿಂದ ಗಣಕಗಳು ಎಲ್ಲ ಭಾಷಾಬಾಂಧವರ ಆಶೋತ್ತರಗಳಿಗೆ ಸುಲಭವಾಗಿ ಸ್ಪಂದಿಸುವಂತೆ ಮಾಡಬಹುದು.

ಯೂನಿಕೋಡ್ ಶಿಷ್ಟತೆ
ಈಗ ಯೂನಿಕೋಡ್ ಪದ್ಧತಿಗೆ ಬದಲಾಗಬೇಕೆಂದರೆ ಈಗಾಗಲೇ ಅಧಿಕೃತಗೊಂಡಿರುವ ಮೂಲಾಕ್ಷರಗಳು ಮತ್ತು ಅವುಗಳಿಗೆ ನಿಗದಿಗೊಳಿಸಿರುವ 16 ಅಂಕಿಸ್ಥಾನದ ಯೂನಿಕೋಡ್ ಸಂಕೇತಗಳನ್ನೇ ಬಳಸುವುದು ಅನಿವಾರ್ಯ. ಸುಮಾರು 1999ನೇ ಇಸವಿಯ ವೇಳೆಗೆ ಭಾರತೀಯ ಭಾಷೆಗಳಿಗೆ ಈ ಅಧಿಕೃತ ಯೂನಿಕೋಡ್ ಸಂಕೇತಗಳನ್ನು ನಿರ್ಧರಿಸುವಾಗ ಇಸ್ಕಿ ಸಂಕೇತ ವ್ಯವಸ್ಥೆಯನ್ನೇ ಆಧಾರವಾಗಿಟ್ಟುಕೊಳ್ಳಲಾಯಿತು. ಇದರಿಂದಾಗಿ ಇಸ್ಕಿಯಿಂದ ಉಂಟಾಗುತ್ತಿದ್ದ ಸಮಸ್ಯೆಗಳು ಯೂನಿಕೋಡ್‍ನಲ್ಲೂ ಕಂಡುಬರುತ್ತಿವೆ. ಹೀಗೆ ಎಲ್ಲ ಭಾರತೀಯ ಭಾಷೆಗಳಲ್ಲೂ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಮನಗಂಡ ಕೇಂದ್ರಸರ್ಕಾರದ ಮಾಹಿತಿ ತಂತ್ರe್ಞÁನ ಇಲಾಖೆಯು ಏರ್ಪಡಿಸಿದ ಹಲವಾರು ಸಭೆಗಳಲ್ಲಿ ಎಲ್ಲ ಭಾರತೀಯ ಭಾಷಾಪ್ರತಿನಿಧಿಗಳು ನಡೆಸಿದ ವಿಚಾರ ವಿನಿಮಯಗಳ ಪರಿಣಾಮವಾಗಿ ಯೂನಿಕೋಡ್‍ನ ಶಿಷ್ಟತೆಗಳಲ್ಲಿ ಪ್ರತಿಭಾಷೆಗೂ ಸಂಬಂಧಿಸಿದಂತೆ ಹಲವಾರು ಅಕ್ಷರಗಳು ಮತ್ತು ಸಂಕೇತಗಳು ಸೇರ್ಪಡೆಯಾಗಬೇಕಾದ ಅವಶ್ಯಕತೆಗಳು ಕಂಡುಬಂದವು. ಇಂತಹ ಅವಶ್ಯಕತೆಗಳನ್ನು ಅಂಗೀಕರಿಸಿ ಭಾರತೀಯ ಭಾಷೆಗಳೂ ಸೇರಿದಂತೆ ವಿಶ್ವದ ಎಲ್ಲ ಭಾಷೆಗಳಿಗಾಗಿ ಯೂನಿಕೋಡ್‍ನ ಬದಲಾದ ಆವೃತ್ತಿಗಳನ್ನು ಅಧಿಕೃತವಾಗಿ ಪ್ರಕಟಿಸುವವರು `ಯೂನಿಕೋಡ್ ಕನ್ಸೋರ್ಷಿಯಮ್ ಎಂಬ ಅಂತಾರಾಷ್ಟ್ರೀಯ ಒಕ್ಕೂಟ. ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕೆಂಬ ಬೇಡಿಕೆಗಳನ್ನು ಮಂಡಿಸಿ ಒತ್ತಾಯಿಸಬೇಕಾದವರು ಈ ಒಕ್ಕೂಟದಲ್ಲಿ  ಅಧಿಕೃತ ಸದಸ್ಯತ್ವವನ್ನು ಪಡೆದಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರe್ಞÁನ ಇಲಾಖೆ. ಈ ಇಲಾಖೆಗೆ ಸರಿಯಾದ ಮಾಹಿತಿಗಳನ್ನು ಒದಗಿಸುವುದು ಆಯಾ ಭಾಷಾ ಸರ್ಕಾರಗಳ ಜವಾಬ್ದಾರಿ. ಕನ್ನಡಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯು 1999ನೇ ಇಸವಿಯಲ್ಲಿ ಆರಂಭವಾಯಿತು. ಆ ಸಂದರ್ಭದಲ್ಲಿ ಹಲವಾರು ಹಿರಿಯ ಕನ್ನಡ ಭಾಷಾ ವಿದ್ವಾಂಸರು ಹಾಗೂ ಗಣಕತಜ್ಞರೊಡನೆ ವಿಪುಲವಾಗಿ ಚರ್ಚಿಸಿ 2000ನೆಯ ಇಸವಿಯ ವೇಳೆಗೆ ಕನ್ನಡಕ್ಕಾಗಿ ಯೂನಿಕೋಡ್ ದಾಖಲೆಯನ್ನು ಸಿದ್ಧಪಡಿಸಲಾಯಿತು. ಆ ವರ್ಷ ನವೆಂಬರ್ ತಿಂಗಳಲ್ಲಿ  ಕೇಂದ್ರ ಸರ್ಕಾರದ ಮಾಹಿತಿ ತಂತ್ರe್ಞÁನ ಇಲಾಖೆಯು ಏರ್ಪಡಿಸಿದ್ದ ಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಆಗ ನಡೆದ ಚರ್ಚೆಗಳು ಮತ್ತು ಹೊರಬಂದ ಸಲಹೆಗಳು ಮುಂತಾದವನ್ನು ಪರಿಗಣಿಸಿ ಮತ್ತೆ ಹಲವಾರು ವಿಚಾರಗಳನ್ನು ಪರಿಶೀಲಿಸಿದ ನಂತರ 2001 ನೇ ಇಸವಿಯಲ್ಲಿ ನಡೆದ ಸಭೆಯಲ್ಲಿ `ಕನ್ನಡಕ್ಕಾಗಿ ಯೂನಿಕೋಡ್ ವರದಿಯನ್ನು ಸಿದ್ಧಪಡಿಸಲಾಯಿತು. ಇದನ್ನು ಕೇಂದ್ರ ಸರ್ಕಾರದ ಮಾಹಿತಿ ತಂತ್ರe್ಞÁನ ಇಲಾಖೆ ಹಾಗೂ ಯೂನಿಕೋಡ್ ಕನ್ಸೋರ್ಷಿಯಮ್ ಸಂಸ್ಥೆಗೆ ಕಳುಹಿಸಲಾಯಿತು. ಇದರಲ್ಲಿನ ಕೆಲವು ಸಲಹೆಗಳನ್ನು ಯೂನಿಕೋಡ್‍ನ ನಾಲ್ಕನೆಯ ಆವೃತ್ತಿಯಲ್ಲಿ ಅಳವಡಿಸಲಾಗಿದೆ. ಹಲವಾರು ವಿಚಾರಗಳಿಗೆ ವಿವರಣೆಗಳನ್ನು ಪಡೆದ ನಂತರ ಕೆಲವು ಸಲಹೆಗಳನ್ನು ಬದಲಿಸಲಾಯಿತು.  

ಯೂನಿಕೋಡ್ ಕಾರ್ಯಾಗಾರ ಮತ್ತು ಕನ್ನಡ

ಯೂನಿಕೋಡ್‍ನ 4ನೇ ಆವೃತ್ತಿಯಯನ್ನು ಕುರಿತು ಸಮಾಲೋಚನೆಗಳನ್ನು ನಡೆಸಿದ 2003 ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರe್ಞÁನ ಇಲಾಖೆಯು ಏರ್ಪಡಿಸಿದ್ದ ಸಭೆಯಲ್ಲಿ ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯ ಸದಸ್ಯರು ಹಾಗೂ ಮೈಕ್ರೋಸಾ¥sóï್ಟ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ಎಲ್ಲ ಭಾರತೀಯ ಭಾಷಾ ಪ್ರತಿನಿಧಿಗಳೂ ತಮ್ಮ ತಮ್ಮ ಭಾಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸಿ ಅವುಗಳಿಗೆ ಪರಿಹಾರಗಳನ್ನೂ ಸೂಚಿಸಿದರು. ಕನ್ನಡಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಚಾರಗಳನ್ನು ಮಂಡಿಸಲಾಯಿತು:

ಕನ್ನಡ ಅಕ್ಷರಗಳ ಮೇಲೆ ಮೂಡಿಸಬೇಕಾದ ಕನ್ನಡ ವ್ಯಾಕರಣದ ಲಘು ಮತ್ತು ಗುರು ಚಿಹ್ನೆಗಳನ್ನು ಯೂನಿಕೋಡ್‍ನಲ್ಲಿ ಅಳವಡಿಸಿಲ್ಲ. ಇವುಗಳೊಡನೆ ವೇದಮಂತ್ರಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಲು ಮತ್ತು ಇತರ ಭಾಷೆಗಳ ಧ್ವನ್ಯಾತ್ಮಕತೆಗೆ ಅನುವಾಗುವಂತೆ ಅಕ್ಷರಗಳ ಮೇಲೆ ಅಥವಾ ಕೆಳಗಡೆ ಗುರುತಿಸಬೇಕಾದ ಹಲವಾರು ಚಿಹ್ನೆಗಳೂ ಅಗತ್ಯವಾಗಿವೆ. ಆದರೆ ಈ ರೀತಿಯ ಚಿಹ್ನೆಗಳು ಎಲ್ಲ ಭಾರತೀಯ ಭಾಷಾ ಲಿಪಿಗಳಿಗೂ ಅಗತ್ಯವಾದುದರಿಂದ ಇಂತಹ ಎಲ್ಲಾ ಚಿಹ್ನೆಗಳನ್ನೂ ಒಟ್ಟುಗೂಡಿಸಿ ಇವುಗಳಿಗೆಂದೇ ಯೂನಿಕೋಡ್‍ನಲ್ಲಿ ಒಂದು ಪ್ರತ್ಯೇಕವಾದ ಸಂಕೇತಾಂಕಣವನ್ನು ಗೊತ್ತುಪಡಿಸಲಾಗಿದೆ. ಇದರಲ್ಲಿ ಲಘು ಮತ್ತು ಗುರು ಚಿಹ್ನೆಗಳನ್ನು ಅಳವಡಿಸಬೇಕು.

ತುಳು ಮತ್ತು ಕೊಡವ ಭಾಷೆಗಳನ್ನು ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತಿದೆ. ಈ ಬಳಕೆಯ ಹಾದಿಯು ಪರಿಪೂರ್ಣವಾಗಿರಲು ಕನ್ನಡಕ್ಕೆ ಇನ್ನೂ ಹಲವಾರು ಮೂಲಾಕ್ಷರಗಳು ಸೇರ್ಪಡೆಯಾಗಬೇಕೆಂಬ ಅಭಿಪ್ರಾಯವು ಕೇಳಿ ಬಂದಿದೆ. ಈ ಬಗ್ಗೆ ವ್ಯಾಪಕವಾದ ವಿಚಾರ ವಿನಿಮಯಗಳ ನಂತರ ಅಗತ್ಯಗಳನ್ನು ಗುರುತಿಸಿ ಯೂನಿಕೋಡ್‍ನಲ್ಲಿ ಹೊಸ ಸೇರ್ಪಡೆಗಳನ್ನು ಮಾಡಬಹುದು. 

ಕನ್ನಡಕ್ಕೆ ವಿಶೇಷವಾದ ಅರ್ಕಾವೊತ್ತಿನ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಪ್ರಚಲಿತವಿರುವ ಪರಿಹಾರ ವಿಧಾನವನ್ನು ಮೈಕ್ರೋಸಾಫ್ಟ್‍ನ ಯೂನಿಸ್ಕೈಬ್ ಎಂಜಿನ್‍ನಲ್ಲೂ ಅಳವಡಿಸಿದರೆ ಇದಕ್ಕಾಗಿ ಯೂನಿಕೋಡ್‍ನಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಕಲ್ಪಿಸುವ ಅಗತ್ಯವಿಲ್ಲ ಎಂಬುದನ್ನು ಒಪ್ಪಲಾಯಿತು. ಈ ವಿಧಾನವನ್ನು ಕನ್ನಡ ಲಿಪಿ ತಂತ್ರಾಂಶ `ನುಡಿ' ನೀಡುವ ಕನ್ನಡ ಭಾಷಾ ಸಂಸ್ಕರಣೆಯ ತಾಂತ್ರಿಕತೆಯಲ್ಲಿ ಬಳಸಲಾಗಿದೆ. ಇತರ ಭಾಷೆಗಳಿಗೆ ಸಂಬಂಧಿಸಿದಂತೆಯೂ ಇಂತಹ ಹಲವಾರು ಮಾರ್ಪಾಡುಗಳಿಗೆ ಒಪ್ಪಲಾಯಿತು. 
ಅರ್ಕಾವೊತ್ತಿನ ಸಮಸ್ಯೆಗೆ ಯೂನಿಕೋಡ್‍ನಲ್ಲಿ ಅಂತಿಮ ಪರಿಹಾರರೂಪವಾದ ಒಂದು ಸಲಹೆಯನ್ನು 2004 ಜುಲೈ ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಕಳುಹಿಸಿ ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಲು ಕೇಳಿಕೊಂಡಿತು. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಯೂನಿಕೋಡ್ ಒಕ್ಕೂಟ ಮತ್ತು ಮೈಕ್ರೋಸಾ¥sóï್ಟ  ಕಂಪನಿಗಳಿಗೆ ಕಳುಹಿಸಲಾಯಿತು.  

ಯೂನಿಕೋಡ್‍ನ ಬಳಕೆ

ಹೀಗೆ ಸಿದ್ಧವಾಗಿರುವ ಕನ್ನಡದ ಮೂಲಾಕ್ಷರಗಳು ಮತ್ತು ಹಲವು ಅಕ್ಷರಚಿಹ್ನೆಗಳಿಗಾಗಿ ನಿಗದಿಪಡಿಸಿರುವ ಯೂನಿಕೋಡ್ ಸಂಖ್ಯಾಸಂಕೇತಗಳನ್ನು ಗಣಕಗಳಲ್ಲಿ ಕನ್ನಡದ ಲಿಪಿಯ ದಾಖಲೆಗಾಗಿ ಬಳಸಬೇಕಾಗಿದೆ. ಹೀಗೆ ದಾಖಲಾಗುವ ಮೂಲಾಕ್ಷರ ಸಂಕೇತಗಳನ್ನು ಗಣಕದ ತೆರೆಯ ಮೇಲೆ ಮೂಡುವ ಅಕ್ಷರಭಾಗಗಳ ಬೇರೊಂದು ಸಂಕೇತ ವ್ಯವಸ್ಥೆಗೆ ಪರಿವರ್ತಿಸಬೇಕು; ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸುವ/ ಕಾಗದದ ಮೇಲೆ ಮುದ್ರಿಸುವ ಪ್ರಕ್ರಿಯೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬೇಕು. ಮುಖ್ಯವಾಗಿ ಮೈಕ್ರೋಸಾ¥sóï್ಟ ಕಂಪನಿಯವರು ತಮ್ಮ ವಿಂಡೋಸ್ ಆವೃತ್ತಿಗಳಲ್ಲಿ ಕನ್ನಡವನ್ನು ನೀಡಲಾರಂಭಿಸಿದ್ದಾರೆ. ಈ ಯಾವುದೇ ಪ್ರಯತ್ನವಾಗಲೀ ಅದು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿರಬೇಕು; ಭಾಷೆ ಹಾಗೂ ಬರವಣಿಗೆಯ ಎಲ್ಲ ಸಾಧ್ಯತೆಗಳಿಗೂ ಸ್ಪಂದಿಸಬೇಕು; ಅಕಾರಾದಿ ವರ್ಗೀಕರಣ ಮುಂತಾದ ಅನೇಕ ಭಾಷಾ ಸಂಬಂಧಿತ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಡಬೇಕು. 

ಮೈಕ್ರೋಸಾಫ್ಟ್, ಯೂನಿಸ್ಕ್ರೈಬ್ ಇತ್ಯಾದಿ

ಗಣಕಗಳಲ್ಲಿ ಕನ್ನಡವೇ ಅಲ್ಲದೆ ಇತರ ಭಾರತೀಯ ಭಾಷೆಗಳನ್ನು ನೀಡಲು ಮೈಕ್ರೋಸಾ¥sóï್ಟನ ಪ್ರಯತ್ನ ಈಗ ಸಾಗಿದೆ. ಮೈಕ್ರೋಸಾ¥sóï್ಟ ಕಂಪನಿಯವರೇ ನೇರವಾಗಿ ಈ ಕ್ರಿಯೆಗಳಲ್ಲಿ ಪಾಲ್ಗೊಂಡು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವನ್ನು ನೀಡಲಾರಂಭಿಸಿದ್ದಾರೆ. ಸದ್ಯದಲ್ಲಿ ವಿಂಡೋಸ್ ಎಕ್ಸ್‍ಪಿಯಿಂದ ಆರಂಭಗೊಂಡು ಮುಂದಿನ ಆವೃತ್ತಿಗಳಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಈ ದಿಕ್ಕಿನಲ್ಲಿ ಗಣಕಗಳಲ್ಲಿ ದಾಖಲಾಗುವ ಭಾರತೀಯ ಭಾಷೆಗಳ ಮೂಲಾಕ್ಷರಗಳ ಯೂನಿಕೋಡ್ ಸಂಕೇತಗಳನ್ನು ವೀಕ್ಷಣೆ / ಮುದ್ರಣಕ್ಕಾಗಿ ಅಗತ್ಯವಾದ ಅಕ್ಷರಭಾಗಗಳ ಸಂಕೇತಗಳನ್ನಾಗಿ ಪರಿವರ್ತಿಸಲು ಮೈಕ್ರೋಸಾ¥sóï್ಟ ಕಂಪನಿಯು ಯೂನಿಸ್ಕ್ರೈಬ್ ಎಂಬ ಒಂದು ತಂತ್ರಾಂಶವನ್ನು ಸಿದ್ಧಪಡಿಸಿದೆ. ಯಾವುದೇ ಭಾರತೀಯ ಭಾಷೆಗಾದರೂ ಈ ನಿರ್ದಿಷ್ಟ ತಂತ್ರಾಂಶವನ್ನೇ ಬಳಸಲಾಗುತ್ತದೆ. ಕನ್ನಡದಲ್ಲಿ ಅರ್ಕಾವೊತ್ತು ಮುಂತಾದ ಹಲವಾರು ಸಮಸ್ಯೆಗಳು ಇರುವಂತೆಯೇ ಇತರ ಭಾಷೆಗಳಲ್ಲೂ ಹಲವಾರು ಸಮಸ್ಯೆಗಳು  ಇವೆ. ಇವುಗಳಿಗೆ ಮೈಕ್ರೋಸಾ¥sóï್ಟ, ಲೈನಕ್ಸ್ ಮುಂತಾದ ಯಾವುದೇ ಕಾರ್ಯಾಚರಣ ವ್ಯವಸ್ಥೆ/ತಂತ್ರಾಂಶ ಪರಿಣತರು ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಹಳೆಯ ಕಾರ್ಯಾಚರಣ ವ್ಯವಸ್ಥೆಗಳು ಇನ್ನೂ ಬಹಳ ಕಾಲ ಬಳಕೆಯಲ್ಲಿರುವುದರಿಂದ ಯೂನಿಕೋಡ್ ಮಾಹಿತಿಗಳನ್ನು ಅವುಗಳಲ್ಲಿ ಎಂಟು ಅಂಕಿಸ್ಥಾನಗಳ ಆಸ್ಕಿ ಶಿಷ್ಟತೆಗೆ ಬದಲಿಸಿ ಬಳಕೆದಾರರಿಗೆ ಯಾವ ತೊಂದರೆಯುಂಟಾಗದಂತೆ ಹಿಮ್ಮುಖ ಬಳಕೆಯ ಅವಕಾಶವನ್ನೂ ನೀಡಬೇಕಾಗಿದೆ. 

ಈಗಾಗಲೇ ತಿಳಿಸಿದಂತೆ, ಯೂನಿಕೋಡ್‍ನ ನಾಲ್ಕನೆಯ ಆವೃತ್ತಿಯು ಅಧಿಕೃತವಾಗಿ ಅಂಗೀಕಾರಗೊಂಡಿದ್ದು ನಂತರದಲ್ಲಿ ಯೂನಿಕೋಡ್‍ನ 4.1ನೆಯ ಆವೃತ್ತಿಯೂ ಹೊರಬಂದಿದೆ. ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯರು ಅರ್ಥೈಸಿಕೊಂಡು ಈ ಬಗ್ಗೆ ಸೂಕ್ತ ವಿವರಣೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ, ಕನ್ನಡದ ದೃಷ್ಟಿಯಿಂದ ಬಳಕೆಗೆ ಸಮರ್ಪಕವೆನಿಸುವ ಯೂನಿಕೋಡ್ ಆವೃತ್ತಿ ಪ್ರಕಟವಾಗಿರುವುದರಿಂದ ಗಣಕೀಕರಣದಲ್ಲಿ ಕನ್ನಡದ ಬಳಕೆಯು ನೂತನ ಆಯಾಮವನ್ನು ಪಡೆಯುತ್ತಿದೆ. 		
									(ಚಿ ವಿ ಶ್ರೀನಾಥಶಾಸ್ತ್ರೀ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ